ಭೋಜ್ ಪುರಿ ನಟಿ ಅಂಜಲಿ ಆತ್ಮಹತ್ಯೆ?
ಮುಂಬೈ: ಭೋಜ್ ಪುರಿ ನಟಿ ಅಂಜಲಿ ಶ್ರೀವಾತ್ಸವ್ (29) ಮುಂಬೈನ ಜುಹು ಪ್ರದೇಶದಲ್ಲಿರುವ ನಿವಾಸದಲ್ಲಿ ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. 29 ಹರೆಯದ ನಟಿ ಅಂಜಲಿ ಕೊನೆಯದಾಗಿ ಭೋಜಪುರಿ ಚಿತ್ರ 'ಕೆಹೂ ತಾ ದಿಲ್ ಮೇ ಬಾ' ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು.
ಮುಂಬೈನ ಜುಹು ಪ್ರದೇಶದ ತಮ್ಮ ನಿವಾಸದಲ್ಲಿ ನಟಿ ಅಂಜಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹವನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಈ ವೇಳೆ ಅಂಜಲಿ ಮೃತಪಟ್ಟಿರುವುದರ ಬಗ್ಗೆ ಯಾವುದೇ ಡೆತ್ ನೋಟ್ ಕಂಡು ಬಂದಿಲ್ಲ. ಪೊಲೀಸರು ಅಂಜಲಿ ಮೃತದೇಹವನ್ನು ಮುಂಬೈನ ಕೂಪರ್ ಆಸ್ಪತ್ರೆಗೆ ಪೋಸ್ಟ್ ಪಾಟಮ್ ಗಾಗಿ ಕಳುಹಿಸಿದ್ದು, ಘಟನೆ ಸಂಬಂಧ ಅವರ ಕುಟುಂಬದವರು ತನಿಖೆ ನಡೆಸುವಂತೆ ಒತ್ತಾಯಿಸಿದ್ದು, ಪ್ರಕರಣ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Comments