ಪ್ರಧಾನಿ ಮೋದಿ ರಾಜಕೀಯ ಗುರು ವಿಧಿವಶ

ಕೋಲ್ಕತ್ತಾ: ಪ್ರಧಾನಿ ಮೋದಿಯವರ ಬದುಕನ್ನು ಬದಲಾಯಿಸಿದ್ದ, ರಾಜಕೀಯ ದಾರಿ ತೋರಿಸಿಕೊಟ್ಟಿದ್ದ ಗುರು ಕೋಲ್ಕತ್ತಾ ರಾಮಕೃಷ್ಣಾ ಆಶ್ರಮದ ಆತ್ಮಸಂಸ್ಥಾನ ಮಹಾರಾಜ್ ಸ್ವಾಮೀಜಿ ವಿಧಿವಶರಾಗಿದ್ದಾರೆ.
ಪ್ರಧಾನಿ ಮೋದಿ ಗುರುವಿನ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ. ೯೯ ವರ್ಷದ ಆತ್ಮಸ್ಥಾನಂದ ಮಹಾರಾಜ್ ಶ್ರೀಗಳು ವಯೋ ಸಹಜ ಸಮಸ್ಯೆಗಳಿಂದ ಬಳಲುತ್ತಿದ್ದರು. ಪ್ರಧಾನಿ ಮೋದಿ ಅವರು ರಾಜಕೀಯ ಪ್ರವೇಶಿಸುವುದಕ್ಕೂ ಮುನ್ನ ರಾಮಕೃಷ್ಣಾಶ್ರಮದಲ್ಲಿ ಸನ್ಯಾಸಿಯಾಗಲು ಬಯಸಿದ್ದರು. ಆದರೆ ಬಾಲಕ ಮೋದಿ ಕೋರಿಕೆಯನ್ನು ತಿರಸ್ಕರಿಸಿದ್ದ ಆತ್ಮಸ್ಥಾನಂದ ಸ್ವಾಮೀಜಿ, ಮೋದಿ ಸನ್ಯಾಸತ್ವ ತಡೆದುದೇಶ ಸೇವೆ ಮಾಡುವಂತೆ ಸಲಹೆ ನೀಡಿದ್ದರು ಎನ್ನಲಾಗಿದೆ.
Comments