ಆಸ್ಕರ್ ಪ್ರಶಸ್ತಿ ಪುರಸ್ಕೃತ, ನಿರ್ದೇಶಕ ಜಾನ್ ಜಿ ನಿಧನ

ಲಾಸ್ ಏಂಜಲ್ಸ್: ಹಾಲಿವುಡ್ ನ ಖ್ಯಾತ ನಿರ್ದೇಶಕ, ಆಸ್ಕರ್ ಪ್ರಶಸ್ತಿ ಪುರಸ್ಕೃತ ಜಾನ್ ಜಿ ಅವಿಲ್ಡ್ ಸೆನ್ ಶುಕ್ರವಾರ ನಿಧನರಾಗಿದ್ದಾರೆ. 81 ವರ್ಷದ ಜಾನ್ ಜಿ ಅವರ ನಿರ್ದೇಶನದಲ್ಲಿ ಮೂಡಿ ಬಂದಿದ್ದ ರಾಕಿ (೧೯೭೭) ಚಿತ್ರ ಹೆಚ್ಚು ಜನಪ್ರಿಯತೆ ಗಳಿಸಿತ್ತು. ವರ್ಷದ ಉತ್ತಮ ಚಿತ್ರ ಹಾಗೂ ನಿರ್ದೇಶನ ಹಾಗೂ ಸಂಕಲನಕ್ಕೆ ಆಸ್ಕರ್ ಪ್ರಶಸ್ತಿ ಲಭಿಸಿತ್ತು. ೧೦ ಲಕ್ಷ ಬಜೆಟ್ ನಲ್ಲಿ ತಯಾರಾಗಿದ್ದ ಚಿತ್ರ ಕೇವಲ ೨೮ ದಿನಗಳಲ್ಲಿ ಆ ಹಣವನ್ನು ಹಿಂಪಡೆದಿತ್ತು.
ಈ ಚಿತ್ರದ ಬಳಿಕ ರಾಕಿ ೫ ಸರಣಿ ಚಿತ್ರಗಳು ತೆರೆ ಕಂಡವು. ಅವರ ನಿರ್ದೇಶನದಲ್ಲಿ ಮೂಡಿ ಬಂದ 'ದಿ ಕರಾಟೆ ಕಿಡ್' ಚಿತ್ರ ಕೂಡ ಸಾಕಷ್ಟು ಯಶಸ್ಸು ಗಳಿಸಿತ್ತು. ಜಾನ್ ಜಿ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಶುಕ್ರವಾರ ಲಾಸ್ ಏಂಜಲೀಸ್ ನಲ್ಲಿ ವಿಧಿವಶರಾಗಿದ್ದಾರೆ ಎಂದು ಪುತ್ರ ಆಂಟನಿ ತಿಳಿಸಿದ್ದಾರೆ.
Comments