1993ರ ಮುಂಬೈ ಸರಣಿ ಸ್ಫೋಟ ; ಅಬು ಸಲೇಂ, ಮುಸ್ತಾಫ್ ಅಪರಾಧಿ

16 Jun 2017 3:58 PM | Crime
539 Report

ಮುಂಬೈ: ೧೯೯೩ಪರ ಮುಂಬೈ ಸರಣಿ ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮುಸ್ತಾಫ್ ದೊಸ್ಸಾ, ಹಾಗೂ ಅವನ ಸಹೋದರ ಮೊಹಮ್ಮದ್ ದೋಸಾ, ಮೊಹಮ್ಮದ್ ತಾಹಿರ್, ಅಬು ಸಲೇಂ ಸೇರಿದಂತೆ 6 ಆರೋಪಿಗಳು ತಪ್ಪಿತಸ್ಥರು ಎಂದು ಮುಂಬೈನ ಟಾಡಾ ನ್ಯಾಯಾಲಯ ತೀರ್ಪು ಪ್ರಕಟಿಸಿದೆ. ಸ್ಫೋಟಕ್ಕೆ ಶಸ್ತ್ರಾಸ್ತ್ರ ಪೂರೈಸಿದ್ದ ಫಿರೋಜ್ ರಶೀದಿ ಖಾನ್ ಸಹ ಅಪರಾಧಿ ಎಂದು ನ್ಯಾಯಾಲಯ ಹೇಳಿದೆ.

ಪ್ರಕರಣದಲ್ಲಿ ಅಬು ಸಲೇಂ ಕೂಡ ಭಾಗಿಯಾಗಿದ್ದು, ೨೦೦೫ರಲ್ಲಿ ಆತನನ್ನು ಪೋರ್ಚ್ ಗಲ್ ನಲ್ಲಿ ಬಂಧಿಸಿ ಭಾರತಕ್ಕೆ ಕರೆತರಲಾಗಿತ್ತು. ಪ್ರಕರಣದ ಮತ್ತೊಬ್ಬ ಆರೋಪಿ ಮುಸ್ತಫಾ ದೊಸ್ಸಾನನ್ನು ಅರಬ್ ಸಂಯುಕ್ತ ರಾಷ್ಟ್ರ ಯುಎಇ ನಿಂದ ಬಂಧಿಸಿ ಕರೆತರಲಾಗಿತ್ತು. ೧೯೯೩ರ ಮಾರ್ಚ್ ೧೨ರಂದು ನಡೆದ ಸರಣಿ ಸ್ಫೋಟದಲ್ಲಿ ೨೫೭ ಜನರು ಮೃತಪಟ್ಟು, ೭೧೫ ಜನರು ಗಂಭೀರವಾಗಿ ಗಾಯಗೊಂಡಿದ್ದರು, ಇದರಿಂದ ೨೭ ಕೋಟಿ ಮೌಲ್ಯದ ಆಸ್ತಿ-ಪಾಸ್ತಿ ಹಾನಿಯಾಗಿತ್ತು.

Edited By

venki swamy

Reported By

Sudha Ujja

Comments