ಕರ್ನಾಟಕದ ಮೂಲದ ಉಗ್ರ, ಯುವಕರನ್ನು ಭಯೋತ್ಪಾದನೆಗೆ ಸೆಳೆಯುತ್ತಿದಿದ್ದು ಹೇಗೆ?

ನವದೆಹಲಿ:ಕರ್ನಾಟಕ ಭಟ್ಕಳ ಮೂಲದ ಮೊಹಮ್ಮದ್ ಶಫಿ ಆರ್ಮರ್ ನನ್ನು ಜಾಗತಿಕ ಉಗ್ರನೆಂದು ಅಮೆರಿಕಾ ಘೋಷಿಸಿದೆ. ಅಮೆರಿಕಾ ಹಣಕಾಸು ಜಾಗತಿಕ ಉಗ್ರರ ಪಟ್ಟಿ ಬಿಡುಗಡೆ ಮಾಡಿದ್ದು. ಈ ಮೂಲಕ ಮಹಮ್ಮದ್ ಶಫಿ ಆರ್ಮರ್ ನನ್ನು ಉಗ್ರರ ಪಟ್ಟಿಯಲ್ಲಿ ಅಮೆರಿಕಾ ಸೇರ್ಪಡೆಗೊಳಿಸಿದೆ.ಇದರಂತೆ ಉಗ್ರ ಪಟ್ಟಿ ಸೇರಿದ ಮೊದಲ ಭಾರತೀಯ ಎನಿಸಿಕೊಂಡಿದ್ದಾನೆ.
ಐಎಂ ಸಂಸ್ಥಾಪಕ ರಿಯಾಜ್ ಸೇರಿದಂತೆ ಭಟ್ಕಳ ಸಹೋದರರೊಂದಿಗೆ ಭಿನ್ನಮತದ ಬಳಿಕ ಆರ್ಮರ್ ಅನ್ಸಾರ್ ಉಲ್ ತೌಹೀದ್ ಸಂಘಟನೆ ಸ್ಥಾಪನೆ ಮಾಡಿದ್ದ. ಬಳಿಕ ಅದು ಇಸಿಸ್ ಉಗ್ರರಿಗೆ ನಿಷ್ಠೆ ತೋರಿತ್ತು. ತಂತ್ರಜ್ಞಾನದ ಜ್ಞಾನವಿದ್ದ ಆರ್ಮರ್ ಫೇಸ್ ಬುಕ್, ಟ್ವಿಟರ್ ಇತರ ಸೋಷಿಯಲ್ ಮೀಡಿಯಾ ಮೂಲಕ ಭಾರತ , ಬಾಂಗ್ಲಾದೇಶ, ಹಾಗೂ ಶ್ರೀಲಂಕಾ ಯುವಕರನ್ನು ಆಕರ್ಷಿಸುತ್ತಿದ್ದ, ಯುವಕರನ್ನು ಇಸಿಸ್ ಗೆ ಸೇರ್ಪಡೆಗೊಳಿಸುತ್ತಿದ್ದನು.
೨೦೧೩ರಲ್ಲಿ ನೇಪಾಳ ಗಡಿಯಲ್ಲಿ ಬಂಧಿತನಾಗಿರುವ ಯಾಸಿನ್ ಭಟ್ಕಳ ನ ವಿಚಾರಣೆಯಲ್ಲಿ ಆರ್ಮರ್ ಗೆ ಇಸಿಸ್ ಜತೆಗೆ ನಂಟಿರುವ ಬಗ್ಗೆ ಸುಳಿವು ನೀಡಿದ್ದ, ಈ ಕುರಿತಂತೆ ರಾಷ್ಟ್ರೀ. ತನಿಖಾ ದಳ ಮಧ್ಯಪ್ರದೇಶ ರತ್ನಂ ಜಿಲ್ಲೆಯಲ್ಲಿ ಸ್ಥಾಪಿಸಿದ್ದ ಇಸಿಸ್ ಘಟಕದ ಮೇಲೆ ದಾಳಿ ನಡೆಸಿತ್ತು. ಈ ವೇಳೆ ಆರ್ಮರ್ ಭಾರತದಲ್ಲಿ ಮುಸ್ಲಿಂ ಯುವಕರನ್ನು ಪ್ರೇರೆಪಿಸಿ ಭಯೋತ್ಪಾದನೆಗೆ ಸೆಳೆಯುತ್ತಿರುವ ಅಂಶ ಬೆಳಕಿಗೆ ಬಂದಿತ್ತು.
Comments