ಐಸಿಸ್'ಗೆ ಸ್ಫೋಟಕ ತಯಾರಿಸಲು ಭಾರತದ 7 ಕಂಪನಿಗಳಿಂದ ಸಾಮಾಗ್ರಿ!
ಟರ್ಕಿ, ಬ್ರೆಝಿಲ್ ಹಾಗೂ ಅಮೆರಿಕಾ ಸೇರಿದಂತೆ ಸುಮಾರು 20 ದೇಶಗಳ 51 ಕಂಪನಿಗಳು ಐಸಿಸ್'ಗೆ ಸ್ಫೋಟಕಗಳನ್ನು ತಯಾರಿಸಲು ಬೇಕಾಗಿರುವ ಸಾಮಾಗ್ರಿಗಳನ್ನು ಪೂರೈಸುತ್ತಿವೆ, ಅವುಗಳಲ್ಲಿ ಭಾರತದ ಏಳು ಕಂಪನಿಗಳಿವೆ ಎನ್ನಲಾಗಿದೆ.
ಕುಖ್ಯಾತ ಉಗ್ರ ಸಂಘಟನೆ ಐಸಿಸ್'ಗೆ ಸ್ಫೋಟಕ ವಸ್ತುಗಳನ್ನು ತಯಾರಿಸಲು ಬೇಕಾದ ಸಾಮಾಗ್ರಿಗಳು ಭಾರತದ 7 ಕಂಪನಿಗಳಿಂದ ಪೂರೈಕೆಯಾಗುತ್ತಿದೆ ಎಂದು ಕಾಂಫ್ಲಿಕ್ಟ್ ಆರ್ಮಮೆಂಟ್ ರಿಸರ್ಚ್ (CAR) ಸಂಸ್ಥೆಯು ಕೈಗೊಂಡ ಅಧ್ಯಯನದಿಂದ ತಿಳಿದು ಬಂದಿದೆಯೆಂದು ಆಂಗ್ಲ ದೈನಿಕ ಇಕನಾಮಿಕ್ಸ್ ಟೈಮ್ಸ್ ವರದಿ ಮಾಡಿದೆ.
ಈವರೆಗೆ ಸುಮಾರು 700 ರೀತಿಯ ಸಾಮಾಗ್ರಿಗಳನ್ನು ಈ ಕಂಪನಿಗಳು ಉತ್ಪಾದನೆ/ ಮಾರಾಟ ಮಾಡಿವೆ ಎನ್ನಲಾಗಿದೆ. ಅವುಗಳಲ್ಲಿ 13 ಕಂಪನಿಗಳು ಟರ್ಕಿಗೆ ಸೇರಿವೆ.ಈ ಅಧ್ಯಯನ ನಡೆಸಲು ಸಂಸ್ಥೆಗೆ 20 ತಿಂಗಳುಗಳು ಬೇಕಾಗಿವೆ. ಭಾರತದ ಕಂಪನಿಗಳ ಪೈಕಿ ಬಹುತೇಕ ಹೆಚ್ಚಿನವು ಡಿಟೊನೇಟರ್/ ಡಿಟೊನೇಟರ್ ಕಾರ್ಡ್/ ಸೇಫ್ಟಿ ಫ್ಯೂಸ್'ಗಳನ್ನು ತಯಾರಿಸುವ ಕಂಪನಿಗಳಾಗಿವೆ ಎಂದು ವರದಿ ಹೇಳಿದೆ. ಇವುಗಳನ್ನು ತಯಾರಿಸಲು ಹಾಗೂ ರಫ್ತು ಮಾಡಲು ಸರ್ಕಾರದ ಅನುಮತಿ ಬೇಕಾಗಿದೆ. ಈ ಸಾಮಾಗ್ರಿಗಳು ಭಾರತದಿಂದ ಲೆಬನಾನ್ ಹಾಗೂ ಟರ್ಕಿಗೆ ಕಳುಹಿಸಲಾಗುತ್ತದೆ ಎನ್ನಲಾಗಿದೆ.
Comments