ಪಾರ್ಟಿ ಮಾಡುವುದಕ್ಕಾಗಿ ಮಕ್ಕಳನ್ನೇ ಕೊಂದ ಅಮ್ಮ!!

ಅಮೆರಿಕಾ: ಅಮೆರಿಕಾದ ಟೆಕ್ಸಸ್ ನಲ್ಲಿ ಮಹಿಳೆಯೊಬ್ಬ ಪಾರ್ಟಿ ಮಾಡುವ ಶೋಕಿಗಾಗಿ ತನ್ನ ಎರಡು ಮಕ್ಕಳನ್ನು ಕೊಂದು ಹಾಕಿರುವ ಘಟನೆ ವರದಿಯಾಗಿದೆ. ೧೯ ವರ್ಷದ ಅಮಂಡಾ ಹಾಕ್ಸಿನ್ ಎಂಬ ಮಹಿಳೆ ಅದ್ಧೂರಿ ಯಾಗಿ ಪಾರ್ಟಿ ಮಾಡಲು ಪ್ಲ್ಯಾನ್ ಮಾಡಿಕೊಂಡಿದ್ದಳು. ಅದಕ್ಕಾಗಿ ಈ ಮಹಿಳೆ ಬ್ರಿನ್ (೨), ಎಡಿಸನ್ (೧) ಎಂಬ ಇಬ್ಬರು ಮಕ್ಕಳನ್ನು ೧೫ ಗಂಟೆಗಳ ಕಾಲ ಆಹಾರವಿಲ್ಲದೇ ಕಾರಿನಲ್ಲಿ ಕೂಡಿ ಹಾಕಿದ್ದಾಳೆ.
ಪಾರ್ಟಿ ವೇಳೆ ಸ್ನೇಹಿತನೊಬ್ಬ ಮಕ್ಕಳನ್ನು ಒಮ್ಮೆ ನೋಡುವಂತೆ ಸೂಚಿಸಿದ್ರು ಆಕೆ ನಿರ್ಲಕ್ಷಿಸಿದ್ದಳು, ಆ ಬಳಿಕ ಮಕ್ಕಳನ್ನು ತಕ್ಷಣವೇ ಆಸ್ಪತ್ರೆಗೆ ಕರೆದ್ಯೊಯದೇ ಮಕ್ಕಳಿಗೆ ಸ್ನಾನ ಮಾಡಿಸಿ ನಂತರ ವೈದ್ಯರ ಹತ್ತಿರ ಈಕೆ ತೆರಳಿದ್ದಳು, ಆದರೆ ಮಕ್ಕಳು ಅಷ್ಟೋತ್ತಿಗಾಗಲೇ ಸಾವನ್ನಪ್ಪಿದ್ದರು ಎಂದು ವರದಿಯಿಂದ ತಿಳಿದು ಬಂದಿದೆ. ಸದ್ಯ ಮಹಿಳೆ ಮೇಲೆ ಮರ್ಡರ್ ಕೇಸ್ ದಾಖಲಾಗಿದೆ.
Comments