CRPF ಶಿಬಿರಗಳ ಮೇಲೆ ಉಗ್ರರಿಂದ ದಾಳಿ

ಶ್ರೀನಗರ್: ದಕ್ಷಿಣ ಕಾಶ್ಮೀರದಲ್ಲಿ ಮಂಗಳವಾರ ಉಗ್ರರು ಸರಣಿ ದಾಳಿ ನಡೆಸಿದ್ದು, ಈ ದಾಳಿಯಲ್ಲಿ ೧೩ ಸಿಆರ್ ಪಿಎಫ್ ಸೈನಿಕರು ಗಾಯಗೊಂಡಿದ್ದಾರೆ. ಈ ವೇಳೆ ಸುರಕ್ಷಾ ಸಿಬ್ಬಂದಿಗಳಿಂದ ನಾಲ್ಕು ರೈಫಲ್ ಗಳನ್ನು ಲೂಟಿ ಮಾಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಸಿಆರ್ ಪಿಎಫ್ ಸೈನಿಕರನ್ನು ಗುರಿಯಾಗಿಸಿಕೊಂಡ ಭಯೋತ್ಪಾದಕರು ಪುಲ್ವಾಮ್ ಜಿಲ್ಲೆಯ ಪದ್ಗಂಪೋರಾದಲ್ಲಿರುವ ಸಿಆರ್ ಪಿಎಫ್ ಶಿಬಿರದ ಮೇಲೆ ಗ್ರೇನೆಡ್ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಓರ್ವ ಪೇದೆಗೆ ಸಣ್ಣಪುಟ್ಟ ಗಾಯಗಳಾಗಿವೆ. ಇದರಂತೆ ಕೇವಲ ೨೪ ಗಂಟೆಗಳಲ್ಲಿ ಉಗ್ರರು ೩ ಕಡೆ ದಾಳಿ ನಡೆಸಿದ್ದು, ಗಡಿ ಪ್ರದೇಶದಲ್ಲಿರುವ ಜನರಿಗೆ ಮತ್ತಷ್ಟು ಆತಂಕ ಹೆಚ್ಚಾಗುವಂತೆ ಮಾಡಿದ್ದಾರೆ.
ನಿನ್ನೆ ಕಾಶ್ಮೀರದಲ್ಲಿ ನಡೆದ ಉಗ್ರರ ಸರಣಿ ದಾಳಿಯ ಹೊಣೆ ಯನ್ನು ಪಾಕಿಸ್ತಾನ ಮೂಲದ ಅಲ್- ಉಮರ್ ಮುಜಾಹಿದ್ದೀನ್ ಮತ್ತು ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಗಳು ಹೊತ್ತುಕೊಂಡಿದ್ದು, ಸರಣಿ ದಾಳಿ ನಡೆಸಿದ್ದು ನಾವೇ ಎಂದು ಹೇಳಿಕೊಂಡಿವೆ.
Comments