ಸೋಷಿಯಲ್ ವಿಡಿಯಾದಲ್ಲಿ ಬಿಜೆಪಿ ವಕ್ತಾರರಿಂದ ‘ಸುಳ್ಳು ಸುದ್ದಿ’?
ನವದೆಹಲಿ: ಕಾರ್ಗಿಲ್ ನಲ್ಲಿ ಸೈನಿಕರು ಭಾರತದ ಧ್ವಜವನ್ನು ಎತ್ತಿ ಹಿಡಿಯುತ್ತಿರುವಂತಹ ಎಡಿಟ್ ಮಾಡಿದ ಫೊಟೋ ಹಾಗೂ ಕನ್ಹಯ್ಯ ಕುಮಾರ್ ಬ್ಗಗೆ ವಿಡಿಯೊ ಹಬ್ಬಿಸುವ ಮೂಲಕ ಸುಳ್ಳು ಸುದ್ದಿಗಳ ಪ್ರಚಾರಕರಂತಾಗಿರುವ ಬಿಜೆಪಿ ವಕ್ತಾರರ ಬಗ್ಗೆ ಮತ್ತೊಂದು ಸುಳ್ಳು ಸುದ್ದಿ ಬಯಲಾಗಿದೆ.
ಈ ಬಾರಿ ಸಂಬಿತ್ ಎನ್ ಡಿಟಿವಿ ಸುದ್ದಿವಾಹಿನಿಯನ್ನು ಗುರಿಯಾಗಿಸಿಕೊಂಡು ಸುಳ್ಳು ಸುದ್ದಿಯೊಂದನ್ನು ಹಬ್ಬಿಸಿದ್ದಾರೆ. ಪಾಕಿಸ್ತಾನ ವೆಬ್ ಸೈಟ್ ಟೈಮ್ಸ್ ಆಫ್ ಇಸ್ಲಾಮಾಬಾದ್ ಮರು ಪ್ರಕಟಣೆ ಮಾಡಿದ್ದ ಸುದ್ದಿಯೊಂದನ್ನು ಸಂಬಿತ್ ರೀ ಟ್ವಿಟ್ ಮಾಡಿದ್ದಾರೆ.
ಇತ್ತೀಚೆಗೆ ಎನ್ ಡಿಟಿವಿ ಸುದ್ದಿವಾಹಿನಿಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂಬಿತ್ ಎನ್ ಡಿಟಿವಿ ಬಿಜೆಪಿ ವಿರುದ್ಧದ ಅಜೆಂಡಾ ಹೊಂದಿದೆ ಎಂದು ಆರೋಪಿಸಿದ್ದರು. ಈ ಆರೋಪವನ್ನು ಗಂಭೀರವಾಗಿ ಪರಿಗಣಿಸಿದ್ದ ವಾಹಿನಿಯು ಕಾರ್ಯಕ್ರಮದ ಮಧ್ಯದಲ್ಲೇ ಸಂಬಿತ್ ಅವರನ್ನು ಚರ್ಚೆಯಿಂದ ಹೊರಗೆ ಕಳಿಸಿತ್ತು.
Comments