ಬದ್ರಿನಾಥ್ ಬಳಿ ಹೆಲಿಕ್ಯಾಪ್ಟರ್ ಕ್ರ್ಯಾಶ್

10 Jun 2017 12:10 PM | Crime
317 Report

ಉತ್ತರಖಂಡ್: ಉತ್ತರಖಂಡ್ ನ ಬದ್ರಿನಾಥ್ ಬಳಿ ಹೆಲಿಕ್ಯಾಪ್ಟರ್ ಕ್ರ್ಯಾಶ್ ಆಗಿದ್ದು, ದುರ್ಘಟನೆಯಲ್ಲಿ ಓರ್ವ ಚೀಫ್ ಇಂಜಿನಿಯರ್ ಮೃತಪಟ್ಟಿದ್ದು, ಇಬ್ಬರು ಪೈಲೆಟ್ ಗಳಿಗೆ ಗಾಯಗಳಾಗಿರುವುದು ಮೂಲಗಳಿಂದ ತಿಳಿದು ಬಂದಿದೆ. ಬದ್ರಿನಾಥ್ ನಿಂದ ಹರಿದ್ವಾರಕ್ಕೆ ಯಾತ್ರಿಕರನ್ನು ವಿಮಾನ ಹೊತ್ತೊಯ್ಯುತ್ತಿತ್ತು ಈ ವೇಳೆ ವಿಮಾನ ಅಪಘಾತವಾಗಿದ್ದು ಅದೃಷ್ಟಾವಶಾತ್ ಯಾತ್ರಿಕರು ಸುರಕ್ಷಿತವಾಗಿದ್ದಾರೆ.

ಘಟನಾ ಸ್ಥಳಕ್ಕೆ ತಕ್ಷಣ ಭೇಟಿ ನೀಡಿದ ಪೊಲೀಸರು ಗಾಯಗೊಂಡವರನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯ್ತು. ಅಪಘಾತಕ್ಕೆ ಒಳಗಾಗಿರುವ ವಿಮಾನವನ್ನು ಮುಂಬೈ ಮೂಲಕ ಕ್ರಿಸ್ಟಲ್ ಏವಿಯೇಶನ್ ಕಂಪನಿ ಒಡೆತನದ್ದು ಎಂದು ಹೇಳಲಾಗುತ್ತಿದೆ.

ಇವತ್ತು ಬೆಳಿಗ್ಗೆ ೭.೩೦ಕ್ಕೆ ವೇಳೆ ಟೇಕ್ ಆಫ್ ಆಗುತ್ತಿದ್ದ ವೇಳೆ ವಿಮಾನ ನೆಲಕ್ಕೆ ಬಂದು ವಿಮಾನ ಬಿದಿದ್ದೆ. ವಿಮಾನ ಬಿದ್ದ ಸ್ಥಳದಲ್ಲಿ ವಿದ್ಯುತ್ ತಂತಿ ಕೂಡ ಅಲ್ಲಿತ್ತು. ಒಂದು ವೇಳೆ ವಿಮಾನ ವಿದ್ಯುತ್ ತಂತಿಗೆ ತಗುಲಿದ್ದರೆ ದೊಡ್ಡ ಮಟ್ಟದಲ್ಲಿ ಅವಘಡ ನಡೆದು ಹೋಗ್ತಿತ್ತು. ಈ ಸಂಬಂಧ ಅಪಘಾತದ ಬಗ್ಗೆ ರಾಜ್ಯ ಸಚಿವ ರಾಮಸ್ವಾಮಿ ಕಮಿಷನರ್ ವಿನೋದ ಶರ್ಮಾ ಅವರಿಗೆ ಘಟನೆ ಕುರಿತು ತನಿಖೆಗೆ ಆದೇಶಿಸಿದ್ದಾರೆ.

Edited By

venki swamy

Reported By

Sudha Ujja

Comments