ಗರ್ಭಿಣಿ ಪತ್ನಿಯನ್ನು ಮೇಲ್ಛಾವಣಿಯಿಂದ ತಳ್ಳಿದ ಪತಿ

ಉತ್ತರಪ್ರದೇಶ: ಉತ್ತರಪ್ರದೇಶದ ನೋಯ್ಡಾದಲ್ಲಿ ಗರ್ಭಿಣಿ ಪತ್ನಿಯನ್ನು ಪತಿ ಮೇಲ್ಛಾವಣಿಯಿಂದ ಎಸೆದಿರುವ ಘಟನೆ ನಡೆದಿರುವುದರ ಬಗ್ಗೆ ವರದಿಯಾಗಿದೆ. ಆರೋಪಿ ಪತಿ ಈಗಾಗ್ಲೇ ಪೊಲೀಸರ ವಶದಲ್ಲಿದ್ದು, ತನ್ನ ಪತ್ನಿ ಬಬಿತಾಳನ್ನು ಮಹಡಿಯಿಂದ ಎಸೆದು ಭೂತ-ಪ್ರೇತ ಎಂದು ಸುಳ್ಳು ಹೇಳಿ ಪೊಲೀಸರಿಗೆ ನಂಬಿಸಲು ಯತ್ನಿಸಿದ್ದಾನೆ.
ಸಿನಿಮೀಯ ರೀತಿಯಲ್ಲಿ ಈ ಘಟನೆ ನಡೆದಿದ್ದು, ನೋಯ್ಡಾ ಸೆಕ್ಟರ್ ೧೨೨ರಲ್ಲಿ ವಾಸವಿದ್ದ ಅಮರ್ ಸಿಂಹ ಹಾಗೂ ಬಬಿತಾ ಇವರಿಬ್ಬರ ಮಧ್ಯೆ ಆಗಾಗ ಕಲಹ ನಡೆಯುತ್ತಿತ್ತು. ಇತ್ತೀಚೆಗೆ ಮೇ ೨೬ರಂದು ಇಬ್ಬರ ಮಧ್ಯೆ ಜಗಳ ನಡೆದಿತ್ತು.
ಈ ವೇಳೆ ಬಬಿತಾ ಮೇಲೆ ಪತಿ ಅಮರ್ ಹಲ್ಲೆಗೆ ಯತ್ನಿಸಿದ್ದಾನೆ. ಜಗಳ ತೀವ್ರವಾಗುತ್ತಿದ್ದಂತೆ ಪತಿ ಅಮರ್ ಸಿಂಹ್ ಪತ್ನಿಯನ್ನು ಛಾವಣಿಯಿಂದ ಕೆಳಗೆ ನೂಕಿದ್ದಾನೆ ಎಂದು ಬಬಿತಾ ಕುಟುಂಬದವರು ಆರೋಪ ಮಾಡಿದ್ದಾರೆ. ಸದ್ಯ ಆರೋಪಿ ಪತಿ ಪೊಲೀಸರ ವಶದಲ್ಲಿದ್ದು, ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Comments