ಸಿಪಿಎಂ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಮೇಲೆ ಹಲ್ಲೆ

ನವದೆಹಲಿ: ಸಿಪಿಎಂ ನ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಮೇಲೆ ನಾಲ್ವರ ಗುಂಪೊಂದು ಹಲ್ಲೆ ನಡೆಸಿರಪವ ಘಟನೆ ವರದಿಯಾಗಿದೆ.
ಈ ಕುರಿತು ಸೀತಾರಾಮ್ ಯೆಚೂರಿ ಟ್ವಿಟ್ ಮಾಡಿದ್ದು, ಸಂಘ ಪರಿವಾರ ಗೂಂಡಾಗಿರಿಯಿಂದ ನಮ್ಮನ್ನು ಹತ್ತಿಕ್ಕಲು ಸಾಧ್ಯವಿಲ್ಲ. ಭಾರತದ ಮಣ್ಣಿಗಾಗಿ ನಡೆಯುವ ಈ ಹೋರಾಟದಲ್ಲಿ ನಾವೇ ಗೆಲ್ಲುತ್ತೇವೆ ಎಂದು ಹೇಳಿದ್ದಾರೆ.
ಸೀತಾರಾಮ್ ಯೆಚೂರಿ ಮಾಧ್ಯಮಗೋಷ್ಠಿ ನಡೆಸುತ್ತಿದ್ದಾಗ ಅಲ್ಲಿಗೆ ಬಂದ ಗುಂಪೊಂದು ಸಿಪಿಎಂ ವಿರುದ್ಧ ಘೋಷಣೆ ಕೂಗಾತ್ತಾ ಸೀನ್ ಕ್ರಿಯೇಟ್ ಮಾಡಿದೆ. ಆದ್ರೆ ಘಟನೆಯಲ್ಲಿ ಯೆಚೂರಿ ಮೇಲೆ ಯಾವುದೇ ಗಾಯಗಳಾಗಿಲ್ಲ. ಹಲ್ಲೆಗೆ ಯತ್ನಿಸಿದವರನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.
Comments