ಇರಾನ್ ಸಂಸತ್ ಮೇಲೆ ಗುಂಡಿನ ದಾಳಿ, ಓರ್ವ ಸಾವು

ಇರಾನ್: ಇರಾನ್ ಸಂಸತ್ತಿನ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ ಪರಿಣಾಮ ಓರ್ವವ್ಯಕ್ತಿ ಸಾವನ್ನಪ್ಪಿದ್ದು, ಇಬ್ಬರು ನಾಗರಿಕರು ಗಾಯಗೊಂಡಿರುವ ಘಟನೆ ವರದಿಯಾಗಿದೆ.
ಇರಾನ್ ಸುದ್ದಿ ಏಜೆನ್ಸಿಗಳು ಸಂಸತ್ತಿನ ಮೇಲಿನ ದಾಳಿಯನ್ನು ಖಚಿತಪಡಿಸಿದ್ದು, ಓರ್ವ ಬಂದೂಕುಧಾರಿಗಳು ಸಂಸತ್ತಿನ ಮೇಲೆ ದಾಳಿ ನಡೆಸಿ, ಸಂಸದರನ್ನು ಒತ್ತೆಯಾಳುಗಳನ್ನಾಗಿ ಪ್ರಯತ್ನ ಮಾಡಿದ್ದಾರೆ.
ಇದೇ ವೇಳೆ ಇಸ್ಲಾಮಿಕ್ ಕ್ರಾಂತಿಕಾರ ಇಮಾಮ್ ಖೊಮೆನಿ ಸಮಾಧಿ ಭವನದ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಈ ಸರಣಿ ದಾಳಿಯಲ್ಲಿ ಹಲವು ಮಂದಿ ಗಾಯಗೊಂಡಿರುವುದು ತಿಳಿದು ಬಂದಿದೆ. ತೆಹರಾನ್ ನಲ್ಲಿರುವ ಇರಾನ್ ಸಂಸತ್ತಿನ ಒಳಗೆ ನುಗ್ಗಿದ ಬಂದೂಕುಧಾರಿಗಳು ಗಾರ್ಡ್ ಗಳ ಮೇಲೆ ಏಕಾ ಏಕಿ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ.
Comments