ಇರಾನ್ ಸಂಸತ್ ಮೇಲೆ ಉಗ್ರರ ದಾಳಿ
ಲಂಡನ್ : ಇರಾನ್ ದೇಶದ ಸಂಸತ್ ಮೇಲೆ ಉಗ್ರಗಾಮಿಗಳು ದಾಳಿ ನಡೆಸಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ರಾಜಧಾನಿ ಟೆಹರಾನ್'ನಲ್ಲಿರುವ ಸಂಸತ್'ವೊಳಗೆ ಹಲವು ಮಂದಿಯನ್ನು ಉಗ್ರರು ಒತ್ತೆಯಾಗಿರಿಸಿಕೊಂಡಿದ್ದಾರೆ ಎಂದು ಫಾರ್ಸ್ ಮತ್ತು ಮೆಹ್ರ್ ಎಂಬ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ಸಂಸತ್'ವೊಳಗೆ ಧಾವಿಸಿ ಬಂದ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿದ್ದಾನೆ. ಅಲ್ಲಿದ್ದ ಒಬ್ಬ ಭದ್ರತಾ ಸಿಬ್ಬಂದಿ ಹಾಗೂ ಇಬ್ಬರು ವ್ಯಕ್ತಿಗಳಿಗೆ ಗಾಯಗಳಾಗಿವೆ ಎಂಬ ಮಾಹಿತಿ ಸದ್ಯಕ್ಕೆ ಸಿಕ್ಕಿದೆ. ಇರಾನ್ ಸಂಸತ್ ಮೇಲೆ ಎಷ್ಟು ಉಗ್ರರು ದಾಳಿ ಎಸಗಿದ್ದಾರೆಂಬ ಸ್ಪಷ್ಟ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಮೂವರು ಉಗ್ರರು ದಾಳಿ ನಡೆಸಿರುವ ಶಂಕೆ ಇದೆ ಕೆಲ ವರದಿಗಳ ಪ್ರಕಾರ, ಸಂಸತ್'ನಲ್ಲಿ ಹಲವು ಮಂದಿಯನ್ನು ಉಗ್ರರು ಒತ್ತೆಯಾಗಿರಿಸಿಕೊಂಡಿದ್ದಾರೆನ್ನಲಾಗಿದೆ. ರಾಯ್ಟರ್ಸ್ ವರದಿ ಪ್ರಕಾರ, ಸಂಸತ್'ನ ಒಳಗೆ ಮತ್ತು ಹೊರಗೆ ಭಾರೀ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.
Comments