ಭಾರತೀಯ ರಾಯಭಾರಿ ಮನೆ ಮೇಲೆ ರಾಕೆಟ್ ದಾಳಿ
ಕಾಬೂಲ್ : ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್ ನ ಭಾರತೀಯ ರಾಯಭಾರಿ ಮನೆ ಬಳಿ ರಾಕೆಟ್ ದಾಳಿ ನಡೆದಿದೆಯ ಕಾಬೂಲ್ ಗೆಸ್ಟ್ ಹೌಸ್ ನ ಟೆನ್ನಿಸ್ ಕೋರ್ಟ್ ನಲ್ಲಿ ಈ ದಾಳಿ ಆಗಿದ್ದು, ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ವರದಿಯಾಗಿದೆ.
ಭಾರತೀಯ ರಾಯಭಾರಿ ಮನ್ ಪ್ರೀತ್ ಮೋಹ್ರಾ ಅವರ ನಿವಾಸ ಬಳಿ ದಾಳಿ ನಡೆದಿದ್ದು, ಕಾಬೂಲ್ ನಲ್ಲಿ ಶಾಂತಿ ಸಮ್ಮೇಳನ ಆರಂಭವಾಗಿರುವ ಬೆನ್ನಲ್ಲೇ ಈ ದಾಳಿ ನಡೆದಿದೆ. ಇತ್ತೀಚೆಗೆ ಕಾಬೂಲ್ ನ ರಾಯಭಾರಿ ಕಚೇರಿ ಸೇರಿ ಹಲವು ವಿದೇಶಿ ದೂತವಾಸ ಕಚೇರಿಗಳ ಸಮೀಪ ಬಾಂಬ್ ಸ್ಫೋಟಗೊಂಡಿತ್ತು. ಈ ವೇಳೆ ೮೦ ಜನರು ಮೃತಪಟ್ಟಿದ್ದರು.
Comments