ನೌಕೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ನಾವಿಕ
ವಿಶಾಖಪಟ್ಟಣ: ಐಎನ್ಎಸ್ ರಾಣಾ ಯುದ್ಧ ನೌಕೆಯಲ್ಲಿ ಯುವ ನಾವಿಕ ವಿಕಾಸ್ ಯಾದವ್ ಗುಂಡಿಟ್ಟುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ವೈಜಾಗ್ ನ ಈಸ್ಟನ್ರ್ ಕಮಾಂಡ್ ಯಲ್ಲಿನ ರಾಣಾ ಯುದ್ಧನೌಕೆಯಲ್ಲಿ ಸೆಂಟ್ರಿ ಕೆಲಸ ಮಾಡುತ್ತಿದ್ದ ವಿಕಾಸ್ ಯಾದವ್ ತಮ್ಮ ಸರ್ವಿಸ್ ರಿವಾಲ್ವರ್ ನಿಂದ ಗುಂಡಿಟ್ಟುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮಧ್ಯಪ್ರದೇಶ ಭಿಂಡ್ ಮೂಲದ ೨೧ ವರ್ಷದ ವಿಕಾಸ್ ಯಾದವ್ ಅವಿವಾಹಿತರಾಗಿದ್ದು, ನೌಕೆಯ ಪವರ್ ಕ್ಲಾಸ್ ೧ರಲ್ಲಿ ಎಲೆಕ್ಟ್ರಿಕಲ್ ಮೆಕಾನಿಕ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಗುಂಡಿನ ಸದ್ದು ಕೇಳಿದ ಮತ್ತೋರ್ವ ನಾವಿಕ ಘಟನಾ ಸ್ಥಳಕ್ಕೆ ಬರುವಷ್ಟರಲ್ಲೇ ವಿಕಾಸ್ ರಕ್ತದ ಮಡುವಿನಲ್ಲಿ ಬಿದ್ದಿದ್ದರು.
Comments