ಮಹಿಳಾ ಪಿ.ಎಚ್.ಡಿ ಸ್ಕಾಲರ್ ನಿಗೂಢ ಸಾವು

ನವದೆಹಲಿ: ೨೭ ವರ್ಷದ ಮಹಿಳಾ ಪಿ.ಹೆಚ್.ಡಿ ಸ್ಕಾಲರ್ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಐಐಟಿಯ ಮಹಿಳಾ ನಳಂದಾ ಅಪಾರ್ಟ್ ಮೆಂಟ್ ನಲ್ಲಿ ಘಟನೆ ನಡೆದಿದ್ದು, ಮಂಜುಳಾ ದೇವಾಕ್ ಎಂಬುವರು ಮೃತ ಪಿ.ಹೆಚ್.ಡಿ ಸ್ಕಾಲರ್ ಆಗಿದ್ದಾರೆ.
ನಳಂದಾ ಅಪಾರ್ಟ್ ಮೆಂಟ್ ನಲ್ಲಿ ಮಂಜುಳಾ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಮೃತದೇಹದ ಬಳಿ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
೨೦೧೩ರಲ್ಲಿ ಮದುವೆಯಾಗಿದ್ದ ಅವರ ಪತಿ, ಅತ್ತೆ-ಮಾವ ಮಧ್ಯಪ್ರದೇಶದ ಭೋಪಾಲ್ ನಲ್ಲಿ ನೆಲೆಸಿದ್ದಾರೆ. ಸದ್ಯ ಮಂಜುಳಾ ಸಾವಿನ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Comments