ಸ್ಯಾಂಡಲ್ ವುಡ್ ಯುವ ನಟನ ಮೇಲೆ ಹಾಡಹಗಲೇ ಅಟ್ಯಾಕ್

30 May 2017 12:24 PM | Crime
634 Report

ಯುಗಪುರುಷ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿಯಾಗುತ್ತಿರುವ ಯುವ ನಟ ಅರ್ಜುನ್ ದೇವ್ ಅವರ ಮೇಲೆ ಇಂದು ರಾಮನಗರ ನ್ಯಾಯಾಲಯದ ಆವರಣದಲ್ಲೇ ಅಟ್ಯಾಕ್ ಮಾಡುವ ಯತ್ನ ನಡೆದಿದೆ.

ಆಸ್ತಿ ವಿಚಾರಕ್ಕೆ ಸಂಬಂಧಿಸಿದ ಪ್ರಕರಣದ ಸಲುವಾಗಿ ನ್ಯಾಯಾಲಯಕ್ಕೆ ಹಾಜರಾಗಲು ನಟ ಅರ್ಜುನ್ ದೇವ್ ಐ20 ಕಾರಿನಲ್ಲಿ ಚಾಲಕ ಹಾಗೂ ಸಹಾಯಕನೊಂದಿಗೆ ಆಗಮಿಸಿದ್ದು, ಈ ವೇಳೆ ಎರಡು ಬೈಕ್ ಗಳಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಕಾರಿನ ಗಾಜು ಒಡೆದಿದ್ದಾರೆ.

ಬಳಿಕ ತಮ್ಮ ಬಳಿಯಿದ್ದ ಗನ್ ನಿಂದ ಗುಂಡು ಹಾರಿಸಲು ಯತ್ನಿಸಿದ್ದಾರೆನ್ನಲಾಗಿದ್ದು, ಕೂಗಿಕೊಂಡಾಗ ಸ್ಥಳದಿಂದ ಪರಾರಿಯಾಗಿದ್ದಾರೆ. ಯಾವ ಕಾರಣಕ್ಕೆ ತಮ್ಮ ಮೇಲೆ ಅಟ್ಯಾಕ್ ಮಾಡುವ ಯತ್ನ ನಡೆಯಿತೆಂಬುದು ತಿಳಿದಿಲ್ಲವೆಂದಿದರುವ ಅರ್ಜುನ್ ದೇವ್ ಪೊಲೀಸರಿಗೆ ಈ ಕುರಿತು ದೂರು ನೀಡಿದ್ದಾರೆ.

Edited By

Shruthi G

Reported By

Shruthi G

Comments