ಮಹಿಳೆಯರಿಗೆ ಸ್ವಯಂ ರಕ್ಷಣೆ ಒದಗಿಸಲು ಎಲೆಕ್ಟ್ರೊ ಶೂ ಸಂಶೋಧಿಸಿದ ವಿದ್ಯಾರ್ಥಿ
ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳಗಳು ಹೆಚ್ಚಿದ್ದು , ಕಾಮುಕರ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳಲು ಹೈದರಾಬಾದ್ ನ 18 ವರ್ಷದ ವಿದ್ಯಾರ್ಥಿಯೊಬ್ಬ 'ಎಲೆಕ್ಟ್ರೊ ಶೂ' ಸಿದ್ಧಪಡಿಸಿದ್ದಾನೆ.'ಎಲೆಕ್ಟ್ರೊ ಶೂ'ನಿಂದ ಒಂದು 'ಕಿಕ್ಕ್' ಕೊಟ್ಟರೆ ಸಾಕು. ಅಪಾಯದಿಂದ ಪಾರಾಗಬಹುದು. ಈ 'ಎಲೆಕ್ಟ್ರೊ ಶೂ' ಮಹಿಳೆಯರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ನೆರವಾಗುತ್ತದೆ ಎಂದು ಈ ವಿದ್ಯಾರ್ಥಿ ಹೇಳಿದ್ದಾನೆ.
ರಾಷ್ಟ್ರವೇ ಬೆಚ್ಚಿಬೀಳಿಸುವ ದೆಹಲಿಯಲ್ಲಿ ನಡೆದ ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಬಳಿಕ, ಮಹಿಳೆಯರ ರಕ್ಷಣೆ ಕುರಿತಂತೆ, ಸೂಕ್ತ ಕಾನೂನು ಸುವ್ಯವಸ್ಥೆ ಮಾಡುವುದು ಸೇರಿದಂತೆ ತಂತ್ರಜ್ಞಾನ ಬಳಸಿಕೊಂಡು ರಕ್ಷಣೆ ಒದಗಿಸಬಹುದಾದ ಆಯಪ್ ಗಳು, ವಾಚ್ ಮಾದರಿಯ ಸಾಧನಗಳು ಬಂದವು. ಜನರು ಮನೆಯಿಂದ ಹೊರ ಬರುವಾಗ ತಮ್ಮ ರಕ್ಷಣೆಗಾಗಿ ಪೆಪ್ಪರ್ ಸ್ಪ್ರೇ ಯನ್ನು ಜತೆಗೆ ತರುವುದನ್ನು ಮರೆಯಬಹುದು. ಆದರೆ, ಪಾದರಕ್ಷೆಗಳನ್ನು ಮರೆಯುವುದಿಲ್ಲ. ತಮಗೆ ರಕ್ಷಣೆಯ ಅಗತ್ಯ ಬಿದ್ದಾಗ ಎದುರಾಳಿಗೆ ಒಂದು 'ಕಿಕ್ಕ್' ಮಾಡಿದರೆ ಸಾಕು. ಆಗ, ಆ ವ್ಯಕ್ತಿಗೆ ವಿದ್ಯುತ್ ಶಾಕ್ ಹೊಡೆಯುತ್ತದೆ. ಆಗ ಅಪಾಯದಿಂದ ಪಾರಾಗಬಹುದು ಎಂದು ಈ 'ಎಲೆಕ್ಟ್ರೊ ಶೂ' ಶೋಧಿಸಿರುವ ಸಿದ್ಧಾರ್ಥ್ ಮಂಡಲ್ ಹೇಳಿಕೊಂಡಿದ್ದಾನೆ.
Comments