ರಾಜ್ಯಸಭೆ, ಲೋಕಸಭೆಯಲ್ಲಿ 2ಜಿ ಗದ್ದಲ

21 Dec 2017 5:23 PM | Politics
373 Report

ನವದೆಹಲಿ: ಇಂದು ಕೂಡ ಪ್ರತಿಧ್ವನಿಸಿದೆ. ಸಂಸತ್ತಿನ ರಾಜ್ಯಸಭೆಯಲ್ಲಿ 2ಜಿ ತರಂಗಾಂತರ ಹಗರಣದ ಖುಲಾಸೆ ಪ್ರಕರಣ ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ ಪ್ರತಿಧ್ವನಿಸಿ ಗದ್ದಲದಿಂದ ಕಲಾಪ ವನ್ನು ಮುಂದೂಡಲಾಯಿತು.

ನವದೆಹಲಿ: ಇಂದು ಕೂಡ ಪ್ರತಿಧ್ವನಿಸಿದೆ. ಸಂಸತ್ತಿನ ರಾಜ್ಯಸಭೆಯಲ್ಲಿ 2ಜಿ ತರಂಗಾಂತರ ಹಗರಣದ ಖುಲಾಸೆ ಪ್ರಕರಣ ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ ಪ್ರತಿಧ್ವನಿಸಿ ಗದ್ದಲದಿಂದ ಕಲಾಪ ವನ್ನು ಮುಂದೂಡಲಾಯಿತು. ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ನೀಡಿರುವ ಹೇಳಿಕೆ ಲೋಕಸಭೆಯಲ್ಲಿ ಚರ್ಚೆ ನಡೆಸಲಾಗಿದೆ.

ಲೋಕಸಭೆಯಲ್ಲಿ ಯೂ ಕೂಡ ಕಾಂಗ್ರೆಸ್ ಸದಸ್ಯ ಜೋತಿರಾದಿತ್ಯ ಸಿಂದಿಯಾ ಮೋದಿ ಹೇಳಿಕೆ ವಿಷಯ ಪ್ರಸ್ತಾಪಿಸಿ ಈ ಬಗ್ಗೆ ಮಾತನಾಡಲು ಸದನದಲ್ಲಿ ಅವಕಾಶ ನೀಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದಾಗ ಪಕ್ಷದ ಸದಸ್ಯರು ಇದಕ್ಕೆ ಧ್ವನಿಗೂಡಿಸಿದರು. ಸ್ಪೀಕರ್ ಸುಮಿತ್ರಾ ಮಹಾಜನ್ ಪ್ರಶ್ನೋತ್ತರ ವೇಳೆಯಲ್ಲಿ ಈ ವಿಷಯ ಚರ್ಚೆಗೆ ಅವಕಾಶ ನೀಡಲು ನಿರಾಕರಿಸಿದರು ಇದರಿಂದ ಸಿಟ್ಟಾದ 20 ಕಾಂಗ್ರೆಸ್ ಸದಸ್ಯರು ಸಭಾಧ್ಯಕ್ಷರ ಪೀಠದ ಮುಂದಿನ ಸ್ಥಳಕ್ಕೆ ಧಾವಿಸಿ ಧರಣಿ ನಡೆಸಿದರು. ಈ ಬಗ್ಗೆ ಪ್ರಧಾನಿ ಸ್ಪಷ್ಟೀಕರಣ ನೀಡುವಂತೆ ಕಾಂಗ್ರೆಸ್ ಒತ್ತಾಯಿಸಿತು.

 

 

 

Edited By

venki swamy

Reported By

Sudha Ujja

Comments