ನಟಿ ಕತ್ರೀನಾಗೆ ಸಿಂಪಲ್ ಆಗಿ 'ಈದ್' ವಿಶ್ ತಿಳಿಸಿದ ಸಲ್ಮಾನ್ ಖಾನ್!!

ಮುಂಬೈ: ಸದಾ ಸಿಂಪಲ್ ಐಡಿಯಾ ಹೊಸತನದ ಮೂಲಕ ಗಮನ ಸೆಳೆಯುವ ನಟ ಸಲ್ಮಾನ್ ಖಾನ್ ತಾವೆಷ್ಟು ಸಿಂಪಲ್ ಅಂತ ತೋರಿಸಿದ್ದಾರೆ. ತನ್ನ ಗೆಳತಿ ನಟಿ ಕತ್ರೀನಾಗೆ 'ಈದ್ ಮುಬಾರಕ್' ತಿಳಿಸಿದ್ದಾರೆ. ಸಲ್ಮಾನ್ ಇನ್ ಸ್ಟಾಗ್ರಾಂನಲ್ಲಿ ಈ ವಿಡಿಯೋ ವನ್ನು ಹಂಚಿಕೊಂಡಿದ್ದಾರೆ.
ಮುಂಬೈ: ಸದಾ ಸಿಂಪಲ್ ಐಡಿಯಾ ಹೊಸತನದ ಮೂಲಕ ಗಮನ ಸೆಳೆಯುವ ನಟ ಸಲ್ಮಾನ್ ಖಾನ್ ತಾವೆಷ್ಟು ಸಿಂಪಲ್ ಅಂತ ತೋರಿಸಿದ್ದಾರೆ. ತನ್ನ ಗೆಳತಿ ನಟಿ ಕತ್ರೀನಾಗೆ 'ಈದ್ ಮುಬಾರಕ್' ತಿಳಿಸಿದ್ದಾರೆ. ಸಲ್ಮಾನ್ ಇನ್ ಸ್ಟಾಗ್ರಾಂನಲ್ಲಿ ಈ ವಿಡಿಯೋ ವನ್ನು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಸಲ್ಮಾನ್ ಹೊಟೇಲ್ ನ ಮಹಡಿಯ ಮೇಲೆ ನಿಂತು ಕತ್ರೀನಾಗೆ ಕಾಗದದಲ್ಲಿ ತಯಾರಿಸಿದ ರಾಕೆಟ್ ಬಿಡುತ್ತಾರೆ. ಈ ಕಾಗದದ ರಾಕೆಟ್ ನೇರವಾಗಿ ಕತ್ರೀನಾಗೆ ತಾಗುತ್ತದೆ. ಕತ್ರೀನಾ ಆ ರಾಕೆಟ್ ಕೈಗೆತ್ತಿಕೊಂಡು ಅತ್ತಿತ್ತ ನೋಡಿ ಅದನ್ನು ಓಪನ್ ಮಾಡುತ್ತಾರೆ. ಕಾಗದದಲ್ಲಿ ಈದ್ ಮುಬಾರಕ್ ಎಂದು ಬರೆಯಲಾಗಿರುತ್ತದೆ.
ಬಾಲಿವುಡ್ ನ ಮಾಜಿ ಪ್ರೇಮಿಗಳಾಗಿದ್ದ ಕತ್ರೀನಾ ಕೈಫ್ ಹಾಗೂ ಸಲ್ಮಾನ್ ಖಾನ್ ಆರು ವರ್ಷಗಳ ಬಳಿಕ ಟೈಗರ್ ಜಿಂದಾ ಹೈ ಸಿನಿಮಾದಲ್ಲಿ ನಟಿಸಿದ್ದರು. ಈ ಮಧ್ಯೆ ಬ್ಯಾಚುಲರ್ ಬಾಯ್ ಸಲ್ಮಾನ್ ತಮ್ಮದೇ ಆದ ಶೈಲಿಯಲ್ಲಿ ಮಾಜಿ ಗೆಳತಿಗೆ ಈದ್ ಹಬ್ಬದ ಶುಭಾಷಯ ಕೋರಿದ್ದಾರೆ. ಟೈಗರ್ ಜಿಂದಾ ಬಳಿಕ ರೆಮೊ ಡಿಸೋಜಾ ನಿರ್ಮಾಣದ ಡ್ಯಾನ್ಸ್ ಆಧಾರಿತ ಚಿತ್ರದಲ್ಲಿ ಸಲ್ಮಾನ್ ನಟಿಸಲಿದ್ದಾರೆ. ಈ ಚಿತ್ರದಲ್ಲಿ ಸಲ್ಮಾನ್ ಗೆ ಜತೆಯಾಗಿ ಜಾಕ್ವೆಲಿನ್ ಫರ್ನಾಂಡೀಸ್ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತ ಕತ್ರೀನಾ ಸಹ ಶಾರೂಖ್ ಖಾನ್ ಸಿನಿಮಾದಲ್ಲಿ ಬ್ಯೂಸಿಯಾಗಲಿದ್ದಾರೆ.
Comments