ಬೆಂಗಳೂರು ನಮ್ಮ ಮೆಟ್ರೋ ದಿಂದ ವ್ಯಾಲೆಂಟೈನ್ಸ್ ಡೇ ಗಿಫ್ಟ್..!!
ಫೆಬ್ರುವರಿ 14ರಂದು ವ್ಯಾಲೆಂಟೆನ್ಸ್ ದಿನದಂದು ನಮ್ಮ ಬೆಂಗಳೂರು ಮೆಟ್ರೋಗೆ ಮೂರು ಹೊಸ ಬೋಗಿಗಳನ್ನು ರೈಲ್ವೆ ಬೋಗಿ ಉತ್ಪಾದನಾ ಕಾರ್ಖಾನೆ ಬಿಇಎಂಎಲ್ ನೀಡುತ್ತಿದೆ.ಇದರ ಪರಿಶೀಲನಾ ಕಾರ್ಯ ನಡೆದು ಮಾರ್ಚ್ ವೇಳೆಗೆ ಕಾರ್ಯಾಚರಣೆ ಆರಂಭಿಸಲಾಗುತ್ತದೆ ಎಂಬ ಮಾಹಿತಿ ತಿಳಿದುಬಂದಿದೆ.
ನಮ್ಮ ಮೇಟ್ರೋ ರೈಲಿನಲ್ಲಿ ಮಹಿಳೆಯರಿಗೆ ಪ್ರತ್ಯೇಕ ಬೋಗಿ ಮೀಸಲಿರಿಸಬೇಕೆಂಬ ಬೇಡಿಕೆ ಈಡೇರುವ ಕಾಲ ಸನ್ನಿಹಿತವಾಗುತ್ತದೆ. ಮಹಿಳೆಯರಿಗೆ ಪ್ರತ್ಯೇಕ ಬೋಗಿ ಇರಬೇಕೆಂಬ ಬೇಡಿಕೆ ಹಲವು ದಿನಗಳಿಂದ ಕೇಳಿಬರುತ್ತಿದ್ದು, ಹೆಚ್ಚುವರಿ ಬೋಗಿಯಲ್ಲಿ ಮಹಿಳಾ ಪ್ರಯಾಣಿಕರಿಗೆ ಮಾತ್ರ ಮೀಸಲಿರಿಸಲಾಗುವುದು ಆರು ಬೋಗಿಗಳ ರೈಲಿನಲ್ಲಿ ಲೋಕೋ ಪೈಲಟ್ ಕ್ಯಾಬಿನ್ ಹಿಂಬಾಗದ ಬೋಗಿಯನ್ನು ಮಹಿಳೆಯರಿಗೆ ಮೀಸಲಿರಿಸಲು ನಿರ್ಧರಿಸಲಾಗಿದೆ ಎಂದು ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಮಹೇಂದ್ರ ಜೈನ್ ಸ್ಪಷ್ಪಪಡಿಸಿದ್ದಾರೆ. ನಮ್ಮ ಮೆಟ್ರೋ ಮೊದಲ ಹಂತ ಕಳೆದ ವರ್ಷ ಪೂರ್ಣಗೊಂಡ ನಂತರ ಪ್ರಯಾಣಿಕರ ದಟ್ಟಣೆ ಹಿನ್ನೆಲೆಯಲ್ಲಿ 50 ರೈಲಿಗಳಿಗೆ ಮೂರು ಹೆಚ್ಚುವರಿ ಬೋಗಿ ಅಳವಡಿಸಲಾಗುತ್ತಿದೆ.ಈಗ ಪ್ರತಿನಿತ್ಯ 4 ಲಕ್ಷ ಪ್ರಯಾಣಿಕರು ರೈಲಿನಲ್ಲಿ ಸಂಚರಿಸುತ್ತಿದ್ದಾರೆ. ಹೆಚ್ಚುವರಿ ಬೋಗಿ ಪೂರೈಕೆಗಾಗಿ ಕಳೆದ ವರ್ಷ ಬಿಇಎಂಎಲ್ ನೊಂದಿಗೆ 1421 ಕೋಟಿ ರೂ ಒಪ್ಪಂದ ಮಾಡಿಕೊಳ್ಳಲಾಗಿತ್ತು ಎಂದು ಅವರು ಹೇಳಿದ್ದಾರೆ. ಉಳಿದಿರುವ ರೈಲ್ವೆ ಕಾಮಗಾರಿ ಜೂನ್ 2019ರಂದು ಪೂರ್ಣಗೊಳ್ಳಲಿದ್ದು , ಫೆಬ್ರುವರಿ 14ರಂದು ನಡೆಯುವ ಸಮಾರಂಭದಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ. ಜೆ. ಜಾರ್ಜ್ ಪಾಲ್ಗೊಳ್ಳಲಿದ್ದಾರೆ ಎಂದು ಮಹೇಂದ್ರ ಜೈನ್ ತಿಳಿಸಿದರು.
Comments