ಉಪರಾಷ್ಟ್ರಪತಿ ಬಂದರೂ ಆಯಂಬುಲೆನ್ಸ್'ಗೆ ಜಾಗ ಬಿಟ್ಟರು!

ಉಪರಾಷ್ಟ್ರಪತಿ ವಾಹನ ತೆರಳುವಾಗ ಟ್ರಿನಿಟಿ ವೃತ್ತದಲ್ಲಿ ಸಿಲುಕಿದ್ದ ಆಯಂಬುಲೆನ್ಸ್ಗೆ ದಾರಿ ಮಾಡಿಕೊಡುವ ಮೂಲಕ ಭಾನುವಾರ ಸಂಚಾರ ಪೊಲೀಸರು ಮಾನವೀಯತೆ ಮರೆದಿದ್ದಾರೆ.
ಭಾನುವಾರ ಬೆಳಗ್ಗೆ ಹೊಸಕೆರೆಹಳ್ಳಿಯಲ್ಲಿ ರುವ ಪಿಇಎಸ್ ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ಪಾಲ್ಗೊಳ್ಳಲು ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ನಗರಕ್ಕೆ ಬಂದಿದ್ದರು. ಕಾರ್ಯಕ್ರಮ ಮುಗಿಸಿಕೊಂಡು ವಾಪಸ್ ಮರಳುವಾಗ ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಟ್ರಿನಿಟಿ ವೃತ್ತದಲ್ಲಿ ಸಂಚಾರ ಪೊಲೀ ಸರು ಎಲ್ಲ ವಾಹನಗಳನ್ನು ತಡೆದು ನಿಲ್ಲಿಸಿದ್ದರು. ಈ ಮಧ್ಯೆ ರೋಗಿ ಇದ್ದ ಆಯಂಬುಲೆನ್ಸ್ ಬಂದಿದ್ದು, ಪೊಲೀಸರು ಆಯಂಬುಲೆನ್ಸ್ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ರೋಗಿಯೊಬ್ಬರನ್ನು ಆಯಂಬುಲೆನ್ಸ್ ಮೂಲಕ ಹಾಸ್ಮೆಟ್ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಈ ವೇಳೆ ಉಪರಾಷ್ಟ್ರಪತಿಗಳು ಏರ್ ಪೋರ್ಟ್ಗೆ ತೆರಳುತ್ತಿದ್ದರು. ಕೂಡಲೇ ಆಯಂಬುಲೆನ್ಸ್ ತೆರಳಲು ಅವಕಾಶ ಮಾಡಿಕೊಡಲಾಯಿತು ಎಂದು ಸಂಚಾರ ವಿಭಾಗದ ಡಿಸಿಪಿ ಅಭಿಷೇಕ್ ಗೊಯೆಲ್ ತಿಳಿಸಿದರು.
Comments