ಮಧ್ಯರಾತ್ರಿಯಾದ್ರೆ ಮೆಟ್ರೋ ರೈಲಿಗೆ ಹತ್ತಕ್ಕೂ ಭಯ..!
ಬೆಂಗಳೂರು: ಬೆಂಗಳೂರಿನಲ್ಲಿ ಮೆಟ್ರೋ ರೈಲು ಓಡಾಡಲು ಪ್ರಾರಂಭಿಸಿದೆ . ಮೆಟ್ರೋ ಶುರುವಾಯಿತು ನಮ್ಮ ರಾಜಧಾನಿಗೊಂದು
ಗರಿಮೆ ಎಂದು ಹೆಮ್ಮೆಪಟ್ಟುಕೊಂಡಿದ್ದೆವು. ಆದರೆ ಇದೀಗ ಮಟ್ರೋ ದಲ್ಲಿ ಓಡಾಡಲು ಪ್ರಯಾಣಿಕರು ಭಯ ಪಡುತ್ತಿದ್ದಾರೆ.
ಬಿಎಂಆರ್ ಸಿ ಏನೋ ಪ್ರಯಾಣಿಕರನ್ನು ಸೆಳೆಯಲು ಮಧ್ಯರಾತ್ರಿವರೆಗೆ ಮೆಟ್ರೋ ಸೇವೆ ಮುಂದುವರಿಸಿದೆ. ಆದರೆ ಈ ಸಂದರ್ಭದಲ್ಲಿ
ಸಭ್ಯ ಪ್ರಯಾಣಿಕರು ಮೆಟ್ರೋದಲ್ಲಿ ಪ್ರಯಾಣಿಸಲೂ ಭಯಪಡುವಂತಾಗಿದೆ. ಕಾರಣ, ಕುಡುಕರ ಹಾವಳಿ. ತಡರಾತ್ರಿಯಲ್ಲಿ ರೈಲು
ಹತ್ತುವ ಕುಡುಕರು ರೈಲಿನೊಳಗೆ ಉಗಿಯುವುದು, ವಾಂತಿ ಮಾಡುವುದು, ಅಸಭ್ಯವಾಗಿ ವರ್ತಿಸುವುದು, ಹುಡುಗಿಯರನ್ನು
ಚುಡಾಯಿಸುವುದು ಮಾಡುತ್ತಿರುತ್ತಾರೆ ಎಂದು ಪ್ರಯಾಣಿಕರೇ ದೂರುತ್ತಿದ್ದಾರೆ.
ಹೀಗಾಗಿ ಮೆಟ್ರೋ ರೈಲಿಗೆ ಹತ್ತಿಸುವ ಮೊದಲು ಪ್ರಯಾಣಿಕರು ಮದ್ಯಪಾನ ಮಾಡಿದ್ದಾರೆಯೇ ಎಂದು ಕೂಡಾ ಪರೀಕ್ಷೆ ಮಾಡಿ
ಬಿಡಬೇಕು ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.
Comments