ಹುಡ್ಗಿಯರನ್ನು ಚುಡಾಯಿಸುತ್ತಿದ್ದ ಹುಡುಗರನ್ನು ಪ್ರಶ್ನೆಸಿದ್ದಕ್ಕೆ ಪೇದೆ ಮೇಲೆ ಹಲ್ಲೆ!
ಬೆಂಗಳೂರು: ರಸ್ತೆ ಬದಿಯಲ್ಲಿ ಹೆಣ್ಣು ಮಕ್ಕಳ ಬೈಕ್ ನಿಲ್ಲಿಸಿ ಚುಡಾಯಿಸುತ್ತಿದ್ದವರನ್ನು ಪ್ರಶ್ನೆ ಮಾಡಲು ಹೋದ , ಸಂಚಾರಿ
ಪೇದೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನ ಕೆಆರ್ ಪುರಂ ಭಟ್ಟರಹಳ್ಳಿಯಲ್ಲಿ ನಡೆದಿದೆ.
ಕೆಆರ್ ಪುರಂ ಠಾಣೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಶಿವಾನಂತ ರಾಥೋಡ್ ಎಂಬುವರು ಸಂಚಾರಿ ಪೇದೆಯಾಗಿದ್ದು, ಸಬ್ ಇನ್ಸ್
ಪೆಕ್ಟರ್ ಜತೆಗೆ ಡಿಡಿ ಕೇಸ್ ಚೆಕ್ ಮಾಡುತ್ತಿದ್ದರು, ಈ ವೇಳೆ ರಸ್ತೆ ಬದಿಯಲ್ಲಿ ಬೈಕ್ ಗಳನ್ನು ಪಾರ್ಕಿಂಗ್ ಮಾಡಿಕೊಂಡು ಕೆಲ
ಹುಡುಗರು ಹೆಣ್ಣು ಮಕ್ಕಳನ್ನು ಚುಡಾಯಿಸುವ ಕೆಲಸ ಮಾಡುತ್ತಿದ್ದರು. ಈ ವಿಷ್ಯ ತಿಳಿದ ಪೇದೆ ಶಿವಾನಂತ ಆ ಹುಡುಗರನ್ನು ಪ್ರಶ್ನೆ
ಮಾಡಿದ್ದಾರೆ. ಇದೇ ವೇಳೆಆ ಹುಡುಗರು ಪೇದೆಗೆ ನಿಂದಿಸಿ ಹಲ್ಲೆ ನಡೆಸಿದ್ದಾರೆ. ಈ ಕುರಿತು ಕೆಆರ್ ಪುರಂ ಪೊಲೀಸ್ ಠಾಣೆಯಲ್ಲಿ
ಶಿವಾನಂದ ದೂರು ನೀಡಿದ್ದಾರೆ.
Comments