ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ಅಸ್ತಂಗತ



ಬೆಂಗಳೂರು: ವರ ನಟ ರಾಜ್ ಕುಮಾರ್ ಧರ್ಮಪತ್ನಿ ಪಾರ್ವತಮ್ಮ ರಾಜ್ ಕುಮಾರ್ ವಿಧಿವಶರಾಗಿದ್ದಾರೆ. ಅನೇಕ ದಿನಗಳಿಂದ
ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಇವತ್ತು ಬೆಳಗಿನ ಜಾವ ೪.೪೦ಕ್ಕೆ ಎಂ.ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಪಾರ್ವತಮ್ಮ ಸಾವಿಗೆ ಚಿತ್ರರಂಗದ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.
ಡಾ.ರಾಜ್ ಕುಮಾರ್ ಸಮಾಧಿ ಪಕ್ಕದಲ್ಲೇ ಪಾರ್ವತಮ್ಮ ರಾಜ್ ಕುಮಾರ್ ಅಂತ್ಯಸಂಸ್ಕಾರ ನಡೆಸಲಾಗುತ್ತದೆ. ತಿರ್ಮೂತಿ ಎಂಬ ಚಿತ್ರವನ್ನು ಪಾರ್ವತಮ್ಮ ರಾಜ್ ಕುಮಾರ್ ಅವರ ಮೊಟ್ಟ ಮೊದಲ ಸಿನಿಮಾವನ್ನು ನಿರ್ಮಾಣ ಮಾಡಿದ್ರು. ರಾಜ ಕುಟುಂಬದಿಂದ ತಮ್ಮ ಮೂವರು ಮಕ್ಕಳನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದರು.
ಪಾರ್ವತಮ್ಮ ರಾಜ್ ಕುಮಾರ್ ತೀವ್ರ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ರಾಮಯ್ಯ ಆಸ್ಪತ್ರೆಯಲ್ಲಿ ನಿತ್ರಾಣ ಸ್ಥಿತಿಯಲ್ಲಿ ಹಲವು ಬಾರಿ ಚಿಕಿತ್ಸೆ ಪಡೆಯುತ್ತಾ ಬಂದಿದ್ದರು. ರಕ್ತದೋತ್ತಡ, ಸಕ್ಕರೆ ಕಾಯಿಲೆ ಯಿಂದ ಹಲವು ಬಾರಿ ಆಸ್ಪತ್ರೆಗೆ ದಾಖಲಾಗಿ ಸುಧಾರಿಸಿಕೊಳ್ಳುತ್ತಿದ್ದರು.
ಪಾರ್ವತಮ್ಮ ಅನಾರೋಗ್ಯ ದಿನದಿಂದ ದಿನಕ್ಕೆ ವ್ಯಾಪಿಸಿತ್ತು. ಅಣ್ಣಾವ್ರ ಹುಟ್ಟಿದ ಹಬ್ಬದಂದು ಕೊಡೆಮಾಡಿದ ಪ್ರಶಸ್ತಿ ಸಮಾರಂಭಕ್ಕೂ ಅವರು ಬಂದಿರಲಿಲ್ಲ. ಸಮಾಧಿ ಇರುವ ರಾಜ್ ಕುಮಾರ್ ಸ್ಮಾರಕಕ್ಕೆ ಎಂದಿನಂತೆ ಬಂದು ಪೂಜೆ ಸಲ್ಲಿಸುವುದು ಅವರಿಗೆ ಸಾಧ್ಯವಾಗಿರಲಿಲ್ಲ, ಎದ್ದು ಹೆಜ್ಜೆ ಇಡಲೂ ಆಗದಂಥ ಅಸಾಹಾಯಕ ಸ್ಥಿತಿಗೆ ತಲುಪಿದ್ದರು.
Comments