ಬೆಂಗಳೂರಲ್ಲಿ ಕೆಂಪೇಗೌಡ ಜಯಂತಿ ಸಂಭ್ರಮ

27 Jun 2017 3:24 PM |
1392 Report

ಇದೇ ಮೊದಲ ಬಾರಿಗೆ ಆಚರಿಸಲಾಗುತ್ತಿರುವ ಕೆಂಪೇಗೌಡ ಜಯಂತಿಗೆ ನಗರದಲ್ಲಿ ಅದ್ಧೂರಿ ಚಾಲನೆ ದೊರೆಯಿತು. ನಾಲ್ಕು ಗಡಿ ಗೋಪುರಗಳಿಂದ ಹೊರಟ ಕೆಂಪೇಗೌಡರ ಜ್ಯೋತಿ ಮೆರವಣಿಗೆಯಲ್ಲಿ ಸ್ವಾಮೀಜಿಗಳು, ಸಾಹಿತಿಗಳು, ಜನಾಂಗದ ಪ್ರಮುಖರು, ಜನಪ್ರತಿನಿಧಿಗಳು, ಸಿನಿಮಾ ನಟರು ಪಾಲ್ಗೊಂಡಿದ್ದರು. ಒಕ್ಕಲಿಗರ ಸಂಘದಿಂದ ಹೊರಟ ಮೆರವಣಿಗೆಯಲ್ಲಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನದ ಚಂದ್ರಶೇಖರನಾಥಸ್ವಾಮೀಜಿ, ಪಟ್ಟನಾಯಕನಹಳ್ಳಿ ಮಠದ ನಂಜಾವದೂತ ಶ್ರೀಗಳು ಪಾಲ್ಗೊಂಡಿದ್ದರು.

ಬೆಳ್ಳಿರಥದಲ್ಲಿ ಕೆಂಪೇಗೌಡರ ಭಾವಚಿತ್ರವನ್ನು ಇಟ್ಟು ನಾಡಹಬ್ಬ ದಸರಾ ಮಾದರಿಯಲ್ಲಿ ಮೆರವಣಿಗೆ ನಡೆಸಲಾಯಿತು. ಕೆಂಪಾಬುಂದಿಕೆರೆ ಗಡಿ ಗೋಪುರ, ಲಾಲ್‍ಬಾಗ್ ಗಡಿ ಗೋಪುರ, ಹಲಸೂರು ಗಡಿ ಗೋಪುರ, ಮೇಕ್ರಿ ವೃತ್ತದ ಬಳಿ ಇರುವ ಗಡಿ ಗೋಪುರದಿಂದ ಮೆರವಣಿಗೆ ನಡೆಸಲಾಯಿತು.  ಮೇಕ್ರಿ ವೃತ್ತದ ಬಳಿಯ ರಮಣಶ್ರೀ ಪಾರ್ಕ್‍ನಲ್ಲಿರುವ ಕೆಂಪೇಗೌಡರ ಗಡಿ ಗೋಪುರಕ್ಕೆ ಇಂದು ವಿಶೇಷ ಪೂಜೆ ಸಲ್ಲಿಸಿ ಬೃಹತ್ ಕೆಂಪೇಗೌಡರ ಪುತ್ಥಳಿಗೆ ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವ ಡಿ.ವಿ.ಸದಾನಂದಗೌಡ, ನಟರಾದ ಪುನೀತ್‍ರಾಜ್‍ಕುಮಾರ್, ಜಗ್ಗೇಶ್, ಶಾಸಕ ಡಾ.ಅಶ್ವತ್ಥನಾರಾಯಣ ಮತ್ತಿತರ ಗಣ್ಯರು ಮಾಲಾರ್ಪಣೆ ಮಾಡಿದರು.

Edited By

Vokkaligara Varthe

Reported By

Vokkaligara Varthe

Comments