*ಮಾಜಿ ಪ್ರಧಾನಿ ಮಣ್ಣಿನ ಮಗ ಹೆಚ್ಡಿ ದೇವೆಗೌಡರ ವಿಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಮಾತುಕತೆ"

23 Jun 2017 10:55 AM |
616 Report

೧. ರಮೇಶ್ ರವರಿಗೆ ದೇವೇಗೌಡರು ಕೇಳಿದ ಮೊದಲನೆ ಮಾತು *"ನೀವೆಲ್ಲಿ ಕುತ್ಕೋತಿರಿ?"*
- ಮತ್ತೊಬ್ಬರ ಮೇಲಿನ ಕಾಳಜಿ

೨. ಎಸ್.ಎಂ. ಕೃಷ್ಣ ಅವರ ಪಶ್ಚಾತ್ತಾಪದ ಮಾತುಗಳು *"ನಾವು ದೇವೇಗೌಡರನ್ನ ಸೋಲಿಸಬಾರದಿತ್ತು"* ಎಂದಾಗ ಗೌಡರು ಅವರಿಗೆ ಕೈ ಮುಗಿದದ್ದು.
- ಕ್ಷಮಿಸುವ/ಶತ್ರುವಿನಲ್ಲಿ ಪಶ್ಚಾತ್ತಾಪದ ಭಾವ ಮೂಡಿಸಿ ಅವರನ್ನು ಗೆಲ್ಲುವುದು.

೩. ದೇವೆಗೌಡರು ತಮ್ಮ ಪತ್ನಿಗೆ ಹೇಳಿದ್ದು *"ನೀವು ಬಂದ್ರಾ? ಅಯೋ ನಾನೇ ಕರ್ಕೊಂಡು ಬರ್ತ್ತಿದ್ನಲ್ಲ"* (ಇದುವರೆಗು ಯಾವ ಸಾಧಕರು ತನ್ನವರೀಗೆ ಹೇಳಿರಲಿಲ್ಲ)
- ಪತ್ನಿಯ ಮೇಲಿನ ಪ್ರೀತಿ ಹಾಗು ಕಾಳಜಿ.

೪. ದೂರದ ಪಂಜಾಬ್ ರಾಜ್ಯದ ರೈತರು ತಮ್ಮ ಒಂದು *ಭತ್ತದ ತಳಿಗೆ* ದೇವೆಗೌಡರ ಹೆಸರಿಟ್ಟಿರುವುದು.
- ಎಂದು ಹೇಳಿಕೊಳ್ಳದ ಗೌಡರ ಹೇಳದೆ ಮಾಡುವ ಗುಣ.

೫. ಕೃಷ್ಣಾನೀರಾವರಿ ಯೋಜನೆಯ ಹುಟ್ಟು ಹಾಕಿ ತನ್ನ ಸ್ವಜಾತಿಯವರಲ್ಲದ ಜನ ಹಾಗು ರೈತರಿರುವ ಜಿಲ್ಲೆಗಳಿಗಾಗಿ ಹೋರಾಡಿ ನೀರಾವರಿ ಯೋಜನೆಯ ಕಟ್ಟಿದ್ದು ಹಾಗೂ ಎಂದಿಗೂ ಮಾರ್ಕೆಟಿಂಗ್ ಮಾಡದೇ ಇರುವುದು.
- ಜಾತ್ಯತೀತತೆ ಹಾಗು ಕಾರ್ಯ ದಕ್ಷತೆ

೬. "ಮೋದಿಯವರು ನನ್ನನು, ನನ್ನ ನಡೆ ನುಡಿಗಳನ್ನು ಟ್ರ್ಯಾಕ್ ಮಾಡುತ್ತಿದ್ದರೆ. ಯಾಕಂದರೆ ಬದುಕಿರುವವರಲ್ಲಿ ನಾನೊಬ್ಬನೇ ಅಕ್ಟಿವ್ ಮಾಜಿ ಪ್ರಧಾನಿ, ಆದರೆ ನನ್ನನು ಏನು ಮಾಡಲಾಗುವುದಿಲ್ಲ"
-೮೫ ರಲ್ಲಿ ಅವರ ಆತ್ಮವಿಶ್ವಾಸ

೭. *"ನಾನು ಕನ್ನಡಿಗ."*
- ಭಾಷಭಿಮಾನಿ

೮. ಹೆಂಡತಿ ಮಕ್ಕಳ ಬಗ್ಗೆ ಬಹುವಚನದಲ್ಲಿ ಮಾತಾಡುವುದು."
ಉದಾ: ಕುಮಾರಸ್ವಾಮಿ ಅವರು"
- ಕಿರಿಯರನ್ನೂ ಗೌರವಿಸುವ ಗುಣ

೯. *"ಕೊಲೆ, ಸುಲಿಗೆ, ಆತ್ಮಹತ್ಯೆ..ಇದೆಲ್ಲಾ ನೋಡಕ್ಕಾ ನನ್ ಬದಕಿರೋದು"*
- ಮರುಗುವ ಗುಣ

೧೦. ಯೋಗ, ಆಹಾರ ಪದ್ಧತಿ, ದೈವ ಭಕ್ತಿ, ಕಾಳಜಿ, ಚಿಂತನೆ, ಕುಟುಂಬ ನಿರ್ವಹಣೆ, ಛಲ, ಸೋಲದ/ಗೆಲ್ಲುವ ಆತ್ಮವಿಶ್ವಾಸ ಹೊಂದಿರುವ *೮೫*ರ ಚೇತನ
- ಶಾರೀರ ಹಾಗು ಶರೀರದ ಆರೋಗ್ಯ ನೋಡಿಕೊಳ್ಳುವ ಗುಣ

Edited By

jds admin

Reported By

jds admin

Comments